ಸಪ್ತರ್ಷಿಮಂಡಲ
	ಖಗೋಳವನ್ನು ರೂಪಿಸುವ 88 ನಕ್ಷತ್ರ ಪುಂಜಗಳ ಪೈಕಿ ಒಂದು (ಅರ್ಸಾ ಮೇಜರ್). ಸ ಅಕ್ಷರದ ಒತ್ತಿನಂತೆ ಅಥವಾ ಮೂಡುತ್ತಿರುವಾಗ ಬೃಹತ್ಪ್ರಶ್ನಾರ್ಥಕ ಚಿಹ್ನೆಯಂತೆ ಇದರ ಆಕಾರ. ಇದನ್ನು ರೂಪಿಸಿರುವ 7 ನಕ್ಷತ್ರಗಳಲ್ಲಿ ಪ್ರಾಚೀನ ಮಾನವನ ಕಲ್ಪನೆ ತಪಸ್ಸ್ವಾಧ್ಯಾಯನಿರತ ಸಪ್ತಋಷಿಗಳನ್ನು ಕೂಡಿಸಿದೆ: 

ಚಿತ್ರ-1

ಪೂರ್ವದಿಂದ ತೊಡಗಿ ಮರೀಚಿ, ವಸಿಷ್ಠ, ಆಂಗೀರಸ್ಸು, ಅತ್ರಿ, ಪುಲಸ್ತ್ಯ, ಪುಲಹ, ಕ್ರತು. ಪುಲಹ-ಕ್ರತು ರೇಖೆಯ ವಿಸ್ತರಣೆ ಅಚಲ ಧ್ರುವನಕ್ಷತ್ರ ಸ್ಥಾನಕ್ಕೆ ಸೂಚಕ. ವಸಿಷ್ಠ (ಪೂರ್ವದಿಂದ ಎರಡನೆಯದು) ನಕ್ಷತ್ರದ ಒತ್ತಿಗೆ (ಉತ್ತರಕ್ಕೆ) ತೀರ ಪೇಲವ ಪ್ರಕಾಶದ ಮಿನುಗುಂಟು. ಇದು ಅರುಂಧತಿ ನಕ್ಷತ್ರ. 			(ನೋಡಿ- ನಕ್ಷತ್ರ-ಪುಂಜ)		
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ